ಅಭಿಪ್ರಾಯ / ಸಲಹೆಗಳು

 

ದಿನಾಂಕ 08.09.1989 ರಂದು ರಾತ್ರಿ ಪಿ.ಡಿ.ಹಳ್ಳಿ ಪೊಲೀಸ್ ಠಾಣಾವ್ಯಾಪ್ತಿಯ ಚೆಳ್ಳಗುರ್ಕಿ ಗ್ರಾಮದ ದೊಡ್ಡನಗೌಡ ಮತ್ತು ಶ್ರೀಮತಿ ಶಿವಮ್ಮ ಇವರ ಮನೆಗೆ 25 ರಿಂದ 30 ಜನರಿರುವ ಆಂದ್ರಪ್ರದೇಶದಿಂದ ಬಂದಿದ್ದ ಡಕಾಯಿತರು ತಂಡವು ಕಳ್ಳತನ ಮಾಡಿರುತ್ತಾರೆ,   ಈ ಪೈಕಿ ದೊಡ್ಡನ ಗೌಡ ಇವರ ಮನೆಯ ಮೇಲೆ ದಾಳಿನಡೆಸಿ ಬೆಳ್ಳಿ ಮತ್ತು ಬಂಗಾರ ಒಟ್ಟು ರೂ.1,00540/-(ಒಂದು ಲಕ್ಷದ ಐದುನೂರ ನಲವತ್ತು ರೂಪಾಯಿಗಳು) ಮತ್ತು ಅವರ ಪಕ್ಕದಮನೆಯವರಾದ ಶ್ರೀಮತಿ ಶಿವಮ್ಮ ಇವರ ಮನೆಯಿಂದ ಬೆಳ್ಳಿ ಮತ್ತು ಬಂಗಾರ ಅಂದಾಜು ಮೌಲ್ಯ ರೂ. 3,09,000/- (ಮೂರು ಲಕ್ಷದ ಒಂಬತ್ತುಸಾವಿರ ರೂಪಾಯಿಗಳು) ಗಳನ್ನು ಕಳವು ಮಾಡಿರುವ ಬಗ್ಗೆ ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂ.149/1989 ಮತ್ತು 150/1989, ಕಲಂ-395 ಐ.ಪಿ.ಸಿ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ. ಈ ಪ್ರಕರಣಗಳಿಗೆ ಸಂಬಂದಿಸಿದಂತೆ ಈಗಾಗಲೇ 6 ಜನ ಆರೋಪಿತರನ್ನು ಬಂಧಿಸಿ ಅವರೆಲ್ಲರು ನ್ಯಾಯಾಲಯದಿಂದ ಖುಲಾಸೆಗೊಂಡಿರುತ್ತಾರೆ, ಮುಂದುವರೆದು ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ 4 ಜನ ಆರೋಪಿತರನ್ನು ದಿನಾಂಕ 07.12.2021 ರಂದು ಪಿ.ಎಸ್.ಐ ಪಿ.ಡಿ.ಹಳ್ಳಿ ಮತ್ತು ತಂಡದವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಪೊಲೀಸ್ ಅಧೀಕ್ಷಕರು, ಬಳ್ಳಾರಿ ರವರು ಪತ್ತೆಕಾರ್ಯದಲ್ಲಿ ಭಾಗಿಯಾಗಿದ್ದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ತಂಡದವರಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 10-12-2021 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬಳ್ಳಾರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080