ಅಭಿಪ್ರಾಯ / ಸಲಹೆಗಳು

ನಾಗರೀಕರ ಹಕ್ಕುಗಳು

ನಾಗರಿಕರ ಹಕ್ಕುಗಳು ನಾಗರಿಕರ ಹಕ್ಕುಗಳನ್ನು ಕಾನೂನಿನಲ್ಲಿ ಕ್ರೋಢಿಕರಿ ಈ ಕೆಳಗಿನಂತೆ ಸೇರಿಸಲಾಗಿದೆ:-   15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಮಹಿಳೆಯರು ಠಾಣೆಗೆ ಹೋಗಲು ನಿರಾಕರಿಸಬಹುದು ಮತ್ತು ಅವರ ಮನೆಯಲ್ಲಿಯೆ ಸಂದರ್ಶನ ನಡೆಸಲು ಸೂಚಿಸಬಹುದು.  ಸಂಜ್ಞೆಯ ಅಪರಾಧದ ಸಮಯದಲ್ಲಿ ಸಾಮಾನ್ಯವಾಗಿ ಬಂಧನ ವಾರಂಟ್ ಇಲ್ಲದೆ ಬಂಧಿಸಬಹುದು. ಬಂಧಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ತನ್ನ ಗುರುತನ್ನು ಸ್ಪಷ್ಟವಾಗಿ ಪ್ರದರ್ಶಿಸಿಬೇಕು. ವಾರೆಂಟ್ ಜಾರಿಯಾದ ನಂತರ ಬಂಧಿಸುವ ಸಮಯದಲ್ಲಿ ಪೊಲೀಸರು ಒತ್ತಾಯ ಮಾಡಬಹುದು. ಆದರೆ ಬಂಧಿಸಿದ ವ್ಯಕ್ತಿ ಘನತೆಯನ್ನು ಕಾಪಾಡಬೇಕು. ಬಂಧಿಸಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಥವಾ ಪರೇಡ ಮಾಡಬಾರದು. ಬಂಧಿಸುವಕ್ಕಿಂತ ಮುಂಚೆ ಪೊಲೀಸ್ ಅಧಿಕಾರಿಯು ಬಂಧನದ ಜ್ಞಾಪನವನ್ನು ತಯಾರಿಸಿರಬೇಕು, ಅದು ಸ್ಥಳದಲ್ಲಿ ಲಭ್ಯವಿರುವ ಸಾಕ್ಷಿಯಿಂದ ದೃಢೀಕರಿಸಿರಬೇಕು. ಮುಖ್ಯವಾಗಿ ಬಂಧಿಸಿದ ವ್ಯಕ್ತಿಗೆ ತನ್ನ ಸಂಬಂದಿಕ ಮತ್ತು ನ್ಯಾಯಾವಾದಿಯೊಂದಿಗೆ ಸಂಪರ್ಕಿಸಲು ಅನುವು ಮಾಡಬೇಕು. ಮಕ್ಕಳು ಮತ್ತು ಬಾಲಾಪರಾಧಿಗಳನ್ನು ಬಂಧನಕ್ಕೆ ತೆಗೆದುಕೊಳ್ಳುವಾಗ ಯಾವುದೇ ಬಲವಂತವಾಗದಂತೆ ವಿಶೇಷ ಗಮನ ಹರಿಸಬೇಕು. ಇಂತಹ ಸಂದರ್ಭಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಜವಾಬ್ದಾರಿಯುತ ಸ್ಥಳಿಯ ನಾಗರಿಕರ ಸಹಾಯ ಪಡೆದು ಕನಿಷ್ಠ ಒತ್ತಾಯ ಮಾಡಬೇಕು. ಬಂಧಿತರನ್ನು 24 ಗಂಟೆಯೊಳಗಾಗಿ ನ್ಯಾಯಾಧೀಶರ ಮುಂದೆ ಹಾಜರ ಪಡಿಸಬೇಕು. ಅಪರಾಧಿಯ ವಿಚಾರಣೆಯನ್ನು ಆರೋಪಿಯ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು. ಮಾನ್ಯ ನ್ಯಾಯಾಲಯವು ಬಂಧಿತ ವ್ಯಕ್ತಿಯನ್ನು ಪೊಲೀಸ್ ಬಂಧನಕ್ಕೆ ನೀಡುವ ಸಮಯದಲ್ಲಿ ಸರ್ಕಾರಿ ವೈದ್ಯರಿಂದ ಪರೀಕ್ಷಿಸಿ ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದು ಒಪ್ಪಿಸುತ್ತದೆ. ಬಂಧಿತನಿಂದ ಜಪ್ತಿಮಾಡಿಕೊಂಡ ವಸ್ತುಗಳನ್ನು ಮಾನ್ಯ ನ್ಯಾಯಾಲಯದಲ್ಲಿ ಹಾಜರ ಪಡಿಸಲಾಗುತ್ತದೆ. ಆ ವ್ಯಕ್ತಿಯು ತನ್ನ ಜಪ್ತಿ ಮಾಡಿದ ವಸ್ತುಗಳನ್ನು ಮಾನ್ಯ ನ್ಯಾಯಾಲಯದ ಆದೇಶದನ್ವಯ ಮರಳಿ ಪಡೆಯಬಹುದು.

ಇತ್ತೀಚಿನ ನವೀಕರಣ​ : 23-02-2022 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬಳ್ಳಾರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080