ಅಭಿಪ್ರಾಯ / ಸಲಹೆಗಳು

ಚಾಲಕರಿಗೆ ಸಲಹೆಗಳು

 

ರಸ್ತೆಯಲ್ಲಿ ಆಗಲಿ ಜೀವನದಲ್ಲಿ ಆಗಲಿ ಪ್ರಯಾಣ ಎಷ್ಟು ಮುಖ್ಯವೋ ಗುರಿಯನ್ನು ಮುಟ್ಟುವುದು ಸಹ ಅಷ್ಠೇ ಮುಖ್ಯ. ಆದ್ದರಿಂದ ನಿಮ್ಮ ನಿಮ್ಮ ಕುಟುಂಬದ ಹಾಗೂ ನಿಮ್ಮ ಸಹ ಪ್ರಯಾಣಿಕರ ಸುರಕ್ಷತೆಗಾಗಿ ಈ ಕೆಳಗಿನ ಸೂಚನೆಗಳನ್ನು ಪಾಲಿಸಿ:.

 ವಾಹನ ಚಲಾಯಿಸುವಾಗ ಎಚ್ಚರದಿಂದರುವುದುಚಾಲನೆಯ ಸಮಯದಲ್ಲಿ ನಮ್ಮ ಸಹ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ ಹಾಗೂ ನಾವು ಸುರಕ್ಷಿತವಾಗಿ ಇರುತ್ತೇವೆ ಎಂದು ಭರವಸೆ ಇಡಲು ಆಗುವುದಿಲ್ಲ. ನಾವು ಸದಾ ನಮ್ಮ ಸುತ್ತಮುತ್ತಲಿನ ಕಡೆ ಗಮನ ಹರಿಸುತ್ತಿರಬೇಕು, ಆದರೂ ಕೆಲವು ಸಂಧರ್ಭಗಳಲ್ಲಿ ಬಹಳಷ್ಟು ಕಡಿಮೆ ಸಮಯದಲ್ಲಿ ನಾವು ಸಮರ್ಥಕವಾಗಿ ಅಪಾಯಕಾರಿ ಸಂದರ್ಭ ಗಳನ್ನು ಎದರುಸಿಸಬೇಕು. ಒಂದು ಮಗು ಅಥವಾ ಪ್ರಾಣಿಯು ತಕ್ಷಣದಲ್ಲಿ ರಸ್ತೆಯನ್ನು ದಾಟಬೇಕಾದರೆ ಅಪಾಯ ಎದುರಿಸಬೇಕಾಗುತ್ತದೆ. ಆದಕಾರಣ ನಿಮಗೆ ನೀಡುವ ಸಲಹೆ ಎಂದರೆ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು ಯಾವಗಲೂ ವಾಹನಗಳನ್ನು ನಿಲ್ಲಸಿ ಕರೆಗಳನ್ನು ಸ್ವೀಕರಿಸಬೇಕು. ತದನಂತರ ವಾಹನ ಚಲಾವಣೆ ಸಂಧರ್ಭದಲ್ಲಿ ಜೋರಾಗಿ ಸಂಗೀತವನ್ನು ಕಾರಿನಲ್ಲಿ ಆಲಿಸಬಾರದು ಹಾಗೂ ದ್ವಿಚಕ್ರ ವಾಹನ ಸವಾರರು ಇಯರ್ ಫೋನ್ ಬಳಸಬಾರದು.

  1. ಶಿರಸ್ತ್ರಾಣ ಅಥವಾ ಹೆಲ್ಮೇಟ್ ತೊಡುವುದು :ದ್ವಿಚಕ್ರ ಚಾಲಕರು ಶಿರಸ್ತ್ರಾಣ ಹಾಗೂ ಕಾರಿನ ಚಾಲಕರು ಸೀಟ್ ಬೆಲ್ಟನ್ನು ಚಾಲನೆಯ ಸಂಧರ್ಬದಲ್ಲಿ ಬಳಸಬೇಕು. ರಸ್ತೆ ಅಪಘಾತದಲ್ಲಿ ವ್ಯಾಪಕವಾಗಿ ಕಂಡುಬರುವ ಅಂಶವೇನಂದರೆ ತಲೆಗೆ ಪೆಟ್ಟಾಗಿ ಸಾವು ಸಂಭವಿಸುವುದು ಇದಕ್ಕೆ ಕಾರಣ ಸರಳವಾಗಿರುವ ಗುಣಮಟ್ಟದ ಸುರಕ್ಷಿತ ಕ್ರಮಗಳನ್ನು ಪಾಲಿಸದೆ ಇರುವದು. ಶಿರಸ್ತ್ರಾಣಗಳನ್ನು ಬಳಸುವಾಗ ಒಳ್ಳೆಯ ಗುಣಮಟ್ಟದ್ದು ಹಾಗೂ ISI ಪ್ರಮಾಣಿಕೃತ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಾವು ವೇಗವಾಗಿ ವಾಹನ ಚಲಾಯಿಸುತ್ತಿರುವಾಗ ಶಿರಸ್ತ್ರಾಣದ ಪಟ್ಟಿಯನ್ನು(ಸ್ಟ್ರ್ಯಾಪ್) ಹಾಕಿಕೊಳ್ಳಬೇಕು. ಅಪಘಾತ ಸಂದರ್ಭದಲ್ಲಿ ತಲೆಯಿಂದ ಗಾಳಿಯಲ್ಲಿ ಹಾರಿ ಹೊಗದಂತೆ ಇರಬಾರದು ಅಷ್ಟೇಯಲ್ಲದೆ ಹಿಂಬದಿ ಸವಾರನು ಕೂಡಾ ಶಿರಸ್ತ್ರಾಣ ಬಳಸಿರುವುದನ್ನು  ಖಚಿತಪಡಿಸಿಕೊಳ್ಳಬೇಕು. ಮೂರು ಜನರ ಸವಾರಿಯಿಂದ ದೂರವಿರಬೇಕು ಏಕೆಂದರೆ ದ್ವಿಚಕ್ರ ವಾಹವನ್ನು ವಿನ್ಯಾಸಗೊಳಿಸಿರುವದು ಕೇವಲ ಇಬ್ಬರು ಸವಾರರಿಗೆ ಮಾತ್ರ ಮತ್ತು ವಾಹನದ ಮೇಲೆ ಬಹಳಷ್ಟು ಭಾರವನ್ನು ಹೇರುವುದರಿಂದ ವಾಹನ ಚಾಲನೆ ಏರುಪೇರು ಆಗುವುದು. ರಸ್ತೆ ಅಪಘಾತದಲ್ಲಿ ಸಾವು ಸಂಭವಿಸಲು ಇದೂ ಕೂಡ ಕಾರಣವಾಗುತ್ತದೆ.
  2. ಅತಿಯಾದ ವೇಗದ ಚಾಲನೆ ಬೇಡ :ಅತಿ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಬಹುಷ: ನಾವು ಸಮಯವನ್ನು ಉಳಿಸಬಹುದು ಆದರೆ ಗಮನಾರ್ಹವಾದ ಅಂಶವೆಂದರೆ, ಅಪಘಾತ ಸಂಭವಿಸುವ ಅವಕಾಶ ಹೆಚ್ಚಿರುತ್ತದೆ. ಆದಕಾರಣ ಅತೀಯಾದ ವೇಗವು ಬಹಳ ಭಯಾನಕವಾದುದು ಗಂಭೀರ ಗಾಯಗಳನ್ನುಂಟುಮಾಡುವುದು. ಅತಿಯಾದ ವೇಗದ ಚಾಲನೆಯಿಂದ ವಾಹನವನ್ನು ನಿಯಂತ್ರಣದಲ್ಲಿ ಇಡುವುದು ಕಠಿಣ ಮತ್ತು ಪ್ರತಿ ಚಾಲಕನಿಗೆ ಪ್ರತಿಕ್ರಿಯಿಸುವ ಸಮಯವನ್ನು ಕ್ಷೀಣಿಸುತ್ತದೆ. ಆದ್ದರಿಂದ ರಸ್ತೆಯ ನಿಯಮದಡಿಯ ವೇಗಕ್ಕೆ ಅನುಗುಣವಾಗಿ ಚಾಲನೆ ಮಾಡಬೇಕು ಮತ್ತು ವೇಗದ ಮಿತಿಯನ್ನು ಮೀರಬಾರದು. ಇನೊಬ್ಬ ವಾಹನ ಚಾಲಕನು ವಾಹನವನ್ನು ಅವಸರಿಸಿ ಹೋಗುತ್ತಿದ್ದರೆ ಹಠಮಾರಿತನ ತೋರದೆ ಅವನಿಗೆ ಹೋಗಲು ಸರಿಯಾದ ಅವಕಾಶ ಮಾಡಿಕೊಡಬೇಕು. ನಿಮ್ಮ ಮುಂದೆ ನಿಧಾನವಾಗಿ ಚಲಿಸುವ ವಾಹನವನ್ನು ಹಿಂದಿಕ್ಕಿ ಮುಂದೆ ಹೋಗಬೇಕಾದರೆ ಬಲಗಡೆಯಿಂದ ಹಿಂದೆ ಹಾಗಬೇಕು.
  3. ಮದ್ಯ ಸೇವಿಸಿ ಚಾಲನೆ ಮಾಡಬಾರದು :ಮದ್ಯ ಸೇವನೆ ಚಾಲನೆಯ ಕೌಶಲ್ಯಕ್ಕೆ ತೀವತರವಾದ ಪರಿಣಾಮ ಬೀರುತ್ತದೆ ಇಂತಹ ಸಂದರ್ಭದಲ್ಲಿ, ಪಾನಮತ್ತ ಚಾಲಕನಿಗೆ ನಾವು ಚಾಲನೆಗೆ ಅವಕಾಶ ಮಾಡಿಕೊಡಬಾರದು. ಯಾವಗಲೂ ಮಧ್ಯಸೇವಿಸಿದ ಮೇಲೆ ವಾಹನ ಚಾಲನೆಗೆ ಚಾಲಕನನ್ನು ನೇಮಿಸಬಾರದು. ಸಮಾರಂಭ ಅಥವ ಔತಣಕೂಟದ ನಂತರ ಪ್ರಯಾಣಿಸಲು ಟ್ಯಾಕ್ಸಿ ಅಥವಾ ಆಟೋರಿಕ್ಷಾ ಬಳಸಬೇಕು. ಮದ್ಯ ಸೇವಿಸಿ ಚಾಲನೆ ಮಾಡುವದು ಶಿಕ್ಷಾರ್ಹ ಅಪರಾಧ. ಇದರ ಮೇಲೆ ಹೆಚ್ಚು ದಂಡವನ್ನು ವಿಧಿಸಬಹುದಲ್ಲದೆ ಜೈಲು ಶಿಕ್ಷೆ ಹಾಗೂ ಪರವಾನಿಗೆ ರದ್ದಾಗುವ ಸಂಭವವಿರುತ್ತದೆ.
  4. ಜಿಬ್ರಾ ಕ್ರಾಸಗಳುಸಂಚಾರದ ಸಂಕೇತಗಳುವೇಗದ ಉಬ್ಬುಗಳು ಇದ್ದಾಗ ವಾಹನದ ಮಿತಿ ನಿಧಾನವಾಗಿರುಬೇಕು.

       ಈ ಸ್ಥಳಗಳು ಪಾದಚಾರಿಗಳು ರಸ್ತೆಯನ್ನು ದಾಟಲು ಅವಕಾಶ ಮಾಡುತ್ತವೆ ಅದಲ್ಲದೆ ಎಡ ಮತ್ತು ಬಲಭಾಗದಲ್ಲಿ ತಿರುವುಗಳು ಇದ್ದಾಗ ವಾಹನದ ವೇಗವನ್ನು ಕಡಿಮೆ           ಟ್ರಾಫಿಕ ಸಿಗ್ನಲ್ ಮೀರಬಾರದು ಮತ್ತು ಹಾರಬಾರದು :ಒಂದು ವೇಳೆ ಟ್ರಾಫಿಕ ಸಿಗ್ನಲ ಮೀರಿದರೆ ಮುಂದಗಡೆಯಿಂದ ಬೇರೆ ದಿಕ್ಕಿನಿಂದ ಬರುವ ವಾಹನದ ಮೇಲೆ ಅಪಘಾತ ಜರುಗುವ ಸಂಭವ ವಿರುತ್ತದೆ.

  1. ವಾಹನ ದಟ್ಟಣೆ ಜಾಗ ಇರುವ ನಗರ ಪ್ರದೇಶದಲ್ಲಿ ಹೈ ಬೀಮ್ ದೀಪ ಬಳಸಬಾರದುಇದು ಎದುರುಗಡೆ ಇರುವ ಚಾಲಕನಿಗೆ ಕುರುಡುತನ ಏರ್ಪಡುವ ಸಂಭವ ಇರುತ್ತದೆ.
  2. ವಾಹನವನ್ನು ಒಳ್ಳೆಯ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು.ಇದರಿಂದ ಪ್ರಯಾಣದ ಮಧ್ಯದಲ್ಲಿ ವಾಹನ ಕೆಟ್ಟು ನಿಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ. ವಾಹನದ ಹೊಗೆ ಪರೀಕ್ಷೆಯನ್ನು ಕ್ರಮವಾಗಿ ಮಾಡಿಸುತ್ತಿರಬೇಕು ಇದರಿಂದ ವಾಯುಮಾಲಿನ್ಯವನ್ನು ಕಡಿಮೆ ಮಾಡಬಹುದು.
  3. ಅನವಶ್ಯಕವಾಗಿ ವಾಹನದ ಹಾರ್ನ್ ಬಳಸಬಾರದು :ಇದು ಇತರ ವಾಹನಗಳ ಚಾಲಕರಿಗೆ ತೊಂದರೆಯನ್ನು ಕೊಡುತ್ತದೆ, ಹಾಗೆ ಅವರ ಗಮನವನ್ನು ಬೇರೆಕಡೆಗೆ ಸೆಳೆಯುತ್ತದೆ.
  4. ನಿಮ್ಮ ವಾಹನವನ್ನು ಹೆಚ್ಚಾಗಿ ಅಲಂಕರಿಸಬಾರದು :ನಿಮ್ಮ ವಾಹನಕ್ಕೆ ಹಾರ ಮತ್ತು ತೋರಣಗಳನ್ನು ಮಿತಿಯಲ್ಲಿ ಹಾಕಬೇಕು. ಚಾಲಕನಿಗೆ ದಾರಿ ಸರಿಯಾಗಿ ಕಾಣಿಸುವುದಿಲ್ಲ. ಚಾಲಕನ ಗಮನವು ಬೇರೆ ಕಡೆಗೆ ಹರಿಯುತ್ತದೆ.
  5. ನಿಮ್ಮ ವಾಹನ ಡ್ರೈವಿಂಗ್ ಪರವಾನಗಿ, ನೋಂದಣಿ ಪ್ರಮಾಣಪತ್ರ, ಹೊರಸೂಸುವಿಕೆ ಪ್ರಮಾಣಪತ್ರ, ವಿಮೆ ಪ್ರಮಾಣಪತ್ರ ಮತ್ತು ತೆರಿಗೆ ಪ್ರಮಾಣಪತ್ರ  ಮುಂತಾದ ದಾಖಲೆಗಳನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ ಸಾರಿಗೆ ವಾಹನ ಮಾಲೀಕರು ಹೆಚ್ಚುವರಿಯಾಗಿ ಫಿಟ್ನೆಸ್ ಪ್ರಮಾಣಪತ್ರ ಮತ್ತು ಪರವಾನಗಿಯನ್ನು ಇಟ್ಟುಕೊಳ್ಳಬೇಕು. ಈ ದಾಖಲೆಗಳನ್ನು ಯಾವ ಸಮಯದಲ್ಲಾದರೂ ಪೊಲೀಸರು ಕೇಳಬಹುದು.
  6. "ನೋ ಪಾರ್ಕಿಂಗ್" ಪ್ರದೇಶಗಳಲ್ಲಿ ವಾಹನ ನಿಲುಗಡೆಯಿಂದ ಪಾದಚಾರಿಗಳಿಗೆ ಮತ್ತು ಸಂಚಾರಕ್ಕೆ ಅಡಚನೆ ಉಂಟಾಗುತ್ತದೆ. ರಸ್ತೆಯ ಪಕ್ಕದಲ್ಲಿ ನಿಲುಗಡೆ ಮಾಡುವಾಗ, ಪಕ್ಕದ ಗೋಡೆಯಿಂದ 15 ಸೆಂ.ಮೀ.ಗಿಂತ ಹೆಚ್ಚು ದೂರ ನಿಲ್ಲಿಸಬಾರದು.

ಇತ್ತೀಚಿನ ನವೀಕರಣ​ : 24-02-2022 11:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬಳ್ಳಾರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080